For Quick Alerts Subscribe Now Bigg Boss OTT Kannada: ಕಿಚ್ಚನ ಎದುರು ಸೋನು- ಸಾನ್ಯಾ ಜಡೆ ಜಗಳ; ಅಷ್ಟಕ್ಕೂ ಆಗಿದ್ದೇನು? View Sample For Quick Alerts ALLOW NOTIFICATIONS For Daily Alerts Must Watch ಮುಖಪುಟ ಹಾಲಿವುಡ್ Hollywood | Updated: Wednesday, August 3, 2022, 10:46 [IST] ವಿಶ್ವವಿಖ್ಯಾತ ಹಾಡುಗಾರ್ತಿ, ನಟಿ ಶಕೀರಾ ಎಂಟು ವರ್ಷ ಸೆರೆ ವಾಸ ಶಿಕ್ಷೆಗೆ ಗುರಿಯಾಗುವ ಆತಂಕದಲ್ಲಿದ್ದಾರೆ. 'ಲ್ಯಾಟಿನ್ ಸಂಗೀತದ ರಾಣಿ' ಎಂದೇ ಕರೆಸಿಕೊಳ್ಳುವ ಶಕೀರಾ ಮತ್ತೊಮ್ಮೆ ಆರ್ಥಿಕ ಅಪರಾಧದ ಆರೋಪ ಹೊತ್ತಿದ್ದು, ಈ ಬಾರಿ ಸ್ಪೇನ್‌ನಲ್ಲಿ ಶಕೀರಾ ತೆರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಶಕೀರಾ, ಆರು ಆರ್ಥಿಕ ಅಪರಾಧಗಳನ್ನು ಎಸಗಿದ್ದು, ಅವರನ್ನು ಎಂಟು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ 180 ಕೋಟಿ ರುಪಾಯಿ (23 ಮಿಲಿಯನ್ ಡಾಲರ್) ದಂಡ ವಿಧಿಸಬೇಕು ಎಂದು ಸ್ಪೇನ್‌ನ ನ್ಯಾಯಾಂಗ ಸಚಿವಾಲಯ ದಾವೆ ಹೂಡಿದೆ. ಶಕೀರಾ, ಸ್ಪೇನ್ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿದ್ದು, ವೈಯಕ್ತಿಕ ಆದಾಯ ತೆರಿಗೆ, ಆಸ್ತಿ ತೆರಿಗೆಗಳನ್ನು ಕಟ್ಟದೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಬಾರ್ಸಿಲೋನಾದಲ್ಲಿ … [Read more...] about ತೆರಿಗೆ ವಂಚನೆ: ಎಂಟು ವರ್ಷ ಸೆರೆವಾಸದ ಆತಂಕದಲ್ಲಿ ಶಕೀರಾ