ತಾರಾ ದಂಪತಿಗಳಾದ ನಟಿ ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಡಿವೋರ್ಸ್ ಪಡೆದು ದೂರಾಗಿದ್ದಾರೆ. ಅಂದಿನಿಂದಲೂ ಇವರ ಬಗ್ಗೆ ನಿತ್ಯವೂ ಒಂದಲ್ಲ ಒಂದು ಸುದ್ದಿ, ಸಮಾಚಾರ ಹರಿದಾಡುತ್ತಲೇ ಇದೆ.
ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಕೂಡ ತಮ್ಮದೇ ಆದ ಬೇರೆ, ಬೇರೆ ದಾರಿಗಳಲ್ಲಿ ಸಾಗುತ್ತಿದ್ದಾರೆ. ಇನ್ನು ಇವರು ಬೇರೆ ಆಗಿರುವುದು ಕುಟುಂಬಸ್ಥರಿಗೂ ಮತ್ತು ಅಭಿಮಾನಿಗಳಿಗೂ ಬೇಸರ ತಂದಿತ್ತು. ಈ ಶಾಕಿಂಗ್ ವಿಚಾರವನ್ನು ಹಲವರು ವಿರೋಧಿಸಿದ್ದರು.
ಆದರೆ ಈಗ ಈ ಮಾಜಿ ದಂಪತಿಗಳ ವಿಚಾರದಲ್ಲಿ ಬೇರೆ ಸುದ್ದಿ ಕೇಳಿ ಬರುತ್ತಿದೆ. ಇದು ಕೊಂಚ ಅಚ್ಚರಿ ಅನಿಸಿದರು ಕೂಡ, ನಡೆ ಈ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಅದಕ್ಕೆ ನಟಿ ಸಮಂತಾ ಅವರ ಹೊಸ ನಡೆ ಕಾರಣ ಆಗಿದೆ.
ವಿಚ್ಛೇದನದ ಪೋಸ್ಟ್ ಡಿಲೀಟ್ ಮಾಡಿದ ಸಮಂತಾ!
ನಟಿ ಸಮಂತಾ ಇದ್ದಕ್ಕಿದ್ದ ಹಾಗೆ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅವರೇ ವಿಶೇಷವಾದದ್ದನ್ನೇನು ಮಾಡಿಲ್ಲ. ಈ ಹಿಂದೆ ತಾನು ಮತ್ತು ನಾಗ ಚೈತನ್ಯ ಇಬ್ಬರೂ ವಿಚ್ಛೇದನ ಪಡೆದು ದೂರ ಆಗುತ್ತಿರುವ ವಿಚಾರನ್ನು ತಿಳಿಸಲು ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಈಗ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇದು ಹಲವರ ಅಚ್ಚರಿಗೆ ಕಾರಣ ಆಗಿದೆ. ಜೊತೆಗೆ ಹತ್ತು ಹಲವು ಕುತೂಹಲಕ್ಕೆ ಕಾರಣ ಆಗಿದೆ.
ಸಮಂತಾ- ನಾಗಚೈತನ್ಯ ಒಂದಾಗುತ್ತಾರ?
ಸಮಂತಾ ಡಿವೋರ್ಸ್ ಬಗ್ಗೆ ಹಾಕಿದ್ದ ಪೋಸ್ಟನ್ ಇನ್ಸ್‌ಸ್ಟಾಗ್ರಾಮ್‌ನಿಂದ ಡಿಲೀಟ್, ಮಾಡಿದ್ದೇ ಮಾಡಿದ್ದು ಹತ್ತಾರು ಗುಸು ಗುಸು ಕೇಳಿ ಬರುತ್ತಿವೆ. ಸಮಂತಾ ನಾಗ ಚೈತನ್ಯ ಮನಸ್ಸು ಬದಲಿಸಿ ಬಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಇದು ಅವರಿಬ್ಬರು ಮತ್ತೇ ಒಂದಾಗುವ ಸೂಚನೆ ಎನ್ನಲಾಗುತ್ತಿದೆ. ಅವರ ಡಿವೋರ್ಸ್ ವಿಚಾರ ಬಹಿರಂಗ ಆಗುತ್ತಲೇ, ಈ ವಿಚಾರ ಹಲವು ದಿನಗಳಿಂದ ಚರ್ಚೆಯಲ್ಲಿದೆ. ಡಿವೋರ್ಸ್‌ಗೆ ಕಾರಣ ಏನು ಎನ್ನುವುದರಿಂದ ಹಿಡಿದು ಇಬ್ಬರು ಡಿವೋರ್ಸ್ ಬಗ್ಗೆ ಏನೆಲ್ಲಾ ಮಾತಾಡಿತ್ತಾರೆ ಎನ್ನುವ ಬಗ್ಗೆಯೂ ಚರ್ಚೆಗಳು ಹರಿದಾಡುತ್ತಿವೆ, ಹೀಗಿರುವಾಗ ಸಮಂತಾ ಪೋಸ್ಟ್ ತೆಗೆದಿರುವುದು ಅಚ್ಚರಿಗೆ ಕಾರಣ ಆಗಿದೆ.
ಸಮಂತಾ ಬಗ್ಗೆ ಒಳ್ಳೆ ಮಾತುಗಳನ್ನಾಡಿದ್ದ ನಾಗಚೈತನ್ಯ!
ಇನ್ನು ಇಬ್ಬರ ಡಿವೋಸ್ ಬಳಿಕ, ನಟ ನಾಗಚೈತನ್ಯ ಸಮಂತಾ ಅವರ ಬಗ್ಗೆ ಮಾತನಾಡಿದ್ದರು. ಆದರೆ ಅವರ ಮಾತಲ್ಲಿ ಸಮಂತಾ ಬಗ್ಗೆ ಬೇಸರ ಇದೆ ಎನ್ನುವುದು ಕಂಡು ಬಂದಿರಲಿಲ್ಲ. ನಾಗಚೈತನ್ಯ ತನಗೆ ಸಮಂತಾ ಅವರ ಸಂತೋಷ ಮುಖ್ಯ ಎಂದಿದ್ದರು. ಅವರು ಖುಷಿಯಾಗಿದ್ದರೆ ನಾನು ಖುಷಿಯಾಗಿ ಇರುತ್ತೇನೆ ಎಂದಿದ್ದರು ನಾಗ ಚೈತನ್ಯ. ಹಾಗೆ ಸಮಂತಾ ಕೂಡ ನಾಗಚೈತನ್ಯ ಬಗ್ಗೆ ಕೆಟ್ಟದಾಗಿ ಎಲ್ಲೂ ಮಾತನಾಡಿಲ್ಲ. ಡಿವೋರ್ಸ್‌ಗೆ ನಾಗ ಚೈತನ್ಯ ಕಾರಣ ಎನ್ನುವುದಾಗಿಯೂ ಹೇಳಿಕೊಂಡಿಲ್ಲ. ಈ ಪೋಸ್ಟ್ ಬೇರೆ ಡಿಲೀಟ್ ಮಾಡಿದ್ದಾರೆ. ಹಾಗಾಗಿ ಈ ಜೋಡಿ ಒಂದಾಗಬಹುದು ಎನ್ನುವ ಮಾತುಗಳು ಕೇಳಿ ಬರ್ತಿವೆ.
ಇಬ್ಬರು ಒಂದಾಗಿ ಎನ್ನುತ್ತಿದೆ ಅಭಿಮಾನಿ ಬಳಗ!
ಈ ಸುದ್ದಿ ತಿಳಿದ ಅಭಿಮಾನಿ ಬಳಗ ಈ ಜೋಡಿ ಮತ್ತೇ ಒಂದಾಗಲಿ ಎಂದು ಆಶಿಸುತ್ತಿದೆ. ಹೇಗೋ ಒಂದು ಇವರು ಒಂದಾಗಿ, ಮತ್ತೆ ಸಮಂತಾ ಮತ್ತು ನಾಗ ಚೈತನ್ಯ ಅವರನ್ನು ಒಟ್ಟಿಗೆ ನೋಡು ಬಯಸುತ್ತೇವೆ ಎನ್ನುವ ಅಭಿಪ್ರಾಯಗಳು ವ್ಯಕ್ತ ಆಗುತ್ತವೆ. ಆದರೆ ಇವರು ಮತ್ತೆ ಒಂದಾಗುತ್ತಾರಾ, ಅಥವಾ ಆ ಕಹಿ ಘಟನೆಯ ಪೋಸ್ಟ್ ನೆನಪು ಕೂಡ ಇರಬಾರದು ಎಂದು ಸಮಂತಾ ಡಿಲೀಟ್ ಮಾಡಿದ್ದಾರೋ ಗೊತ್ತಿಲ್ಲ. ಇದಕ್ಕೆಲ್ಲಾ ಸ್ಯಾಮ್ ಉತ್ತರಿಸಬೇಕು.
Read more about: samantha naga chaitanya divorce tollywood telugu ಸಮಂತಾ ನಾಗ ಚೈತನ್ಯ ವಿಚ್ಛೇದನ ತೆಲುಗು
- Sri Lanka: Chinese Roulette in Paradise Isle
- Choose your own Commencement
- Guru's Weekly Pick: May 18-24
- Sidelines (May 14): Coaches polls, news and notes
ಅಚ್ಚರಿ: ಸಮಂತಾ, ನಾಗಚೈತನ್ಯ ಮತ್ತೆ ಒಂದಾಗ್ತಾರಂತೆ!? have 84 words, post on kannada.filmibeat.com at January 21, 2022. This is cached page on Movie News. If you want remove this page, please contact us.